(ನ್ಯೂಸ್ ಕಡಬ)newskadaba.com ಈರೋಡ್ ಫೆ.09. ಪ್ರಾಣಿಯೊಂದು ನಾಯಿ ಮರಿಯನ್ನು ದತ್ತು ಪಡೆದು ಸ್ವಂತ ಮಗುವಿನಂತೆ ಸಲಹುತ್ತಿರುವ ಅಪರೂಪದ ಘಟನೆಗೆ ತಮಿಳುನಾಡಿನ ಈರೋಡ್ ದಲ್ಲಿ ನಡೆದಿದೆ. ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಇಲ್ಲದ ಈ ಕಾಲಘಟ್ಟದಲ್ಲಿ ಕೋತಿಯೊಂದು ತನ್ನದಲ್ಲದ ನಾಯಿ ಮರಿಯನ್ನು ತನ್ನ ಮಗುವಿನಂತೆ ರಕ್ಷಣೆ ಮಾಡಿ ಸಾಕಿ ಸಲಹುತ್ತಿದೆ. ಈ ಕೋತಿ ಹಾಗೂ ಪುಟ್ಟ ನಾಯಿ ಮರಿಯ ಒಡನಾಟಕ್ಕೆ ಮಾನವರು ತಲೆ ಬಾಗುತ್ತಿದ್ದಾರೆ.
ಈರೋಡ್ನ ಸ್ಥಳೀಯರು ಹಾಗೂ ಪ್ರವಾಸಿಗರು ಈ ನಾಯಿ ಹಾಗೂ ಕೋತಿಯ ಒಡನಾಟ ನೋಡಿ ಅಚ್ಚರಿ ಪಟ್ಟಿದ್ದರು. ಇವೆರಡರ ಆತ್ಮೀಯತೆ ಎಷ್ಟಿತ್ತೆಂದರೆ ಇವುಗಳು ಈಗ ಈರೋಡ್ನ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಜೈವಿಕ ತಾಯಿ ಮಗುವಿನಂತೆ ಈ ಕೋತಿ ಹಾಗೂ ನಾಯಿ ಮರಿ ಒಡನಾಟವಿದ್ದು, ಇದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.