ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣ ➤ ಇಬ್ಬರು ಪೊಲೀಸರ ವಶಕ್ಕೆ



(ನ್ಯೂಸ್ ಕಡಬ)newskadaba.com ಮಂಜೇಶ್ವರ, ಫೆ.05. ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಕೂಳೂರಿ ನ ಮುಹಮ್ಮದ್ ನೌಫಾಲ್ (33) ಮತ್ತು ತಲಪಾಡಿ ನೇರ್ಲಪ್ಪಾಡಿ ಯ ಕೆ. ಬಿ ಫೈಝಲ್ (26) ಬಂಧಿತರು. ಇವರು ಎಂಡಿಎಂಎ ಮಾದಕ ವಸ್ತು ಸಾಗಾಟದ ಏಜೆಂಟ್ ಗಳೆಂದು ಪೊಲೀಸರು ತಿಳಿಸಿದ್ದಾರೆ.








ಕೆಲ ದಿನಗಳ ಹಿಂದೆ ಮಂಜೇಶ್ವರ ಪೊಲೀಸರು ಮೂವರನ್ನು ಎಂ ಡಿ ಎಂ ಎ ಮಾದಕ ವಸ್ತು ಸಹಿತ ಪೊಲೀಸರು ಬಂಧಿಸಿದ್ದರು. ಇವರಿಗೆ ಈ ಇಬ್ಬರು ಮಾದಕ ವಸ್ತು ತಲ ಪಿಸಿದ್ದರು. ಬಂಧಿತ ಮೂವರು ನೀಡಿದ ಸುಳಿವು ಆಧಾರಿಸಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಏಜೆಂಟರ್ ಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನೌಫಲ್ ಮತ್ತು ಫೈಝಲ್ ಒಂದು ಲಕ್ಷ ರೂ.ಗೆ ಮಾದಕ ವಸ್ತು ತಲಪಿಸಿದ್ದಾಗಿ ಮಾಹಿತಿ ನೀಡಿದ್ದರು. ಮೊಬೈಲ್ ನಂಬ್ರದ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಿಂದ ಇಬ್ಬರನ್ನು ಬಂಧಿಸಲಾಗಿದೆ.






error: Content is protected !!
Scroll to Top