➤ ಸ್ನಾನಕ್ಕೆ ಹೋಗಿದ್ದ ನವವಧು ಬಾತ್‌ ರೂಂನಲ್ಲೇ ದುರಂತ ಅಂತ್ಯ!

(ನ್ಯೂಸ್ ಕಡಬ) newskadaba.com,ಮೀರತ್.ಜ.31. ಉತ್ತರಪ್ರದೇಶದ ಮೀರತ್​ ನಗರದಲ್ಲಿ ಆಘಾತಕಾರಿ ಘಟನೆಯಲ್ಲಿ ನವವಧುವೊಬ್ಬರು ದುರಂತ ಅಂತ್ಯ ಕಂಡಿದ್ದಾರೆ. ವಿವಾಹವಾಗಿ ಗಂಡನ ಮನೆಗೆ ಸೇರಿದ ಮಾರನೆಯ ದಿನವೇ ಮಹಿಳೆ ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ವರದಿಗಳ ಪ್ರಕಾರ ಸ್ನಾನಕ್ಕೆಂದು ಹೋಗಿದ್ದ ಮಹಿಳೆ ಸಾಕಷ್ಟು ಸಮಯವಾದರೂ ಹೊರ ಬರದಿದ್ದರಿಂದ ಅನುಮಾನಗೊಂಡು ಮನೆಯವರು ಬಾಗಿಲು ತಟ್ಟಿದ್ದಾರೆ. ಸ್ನಾನದ ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರಿಂದ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಆಕೆ ಪಜ್ಞೆ ತಪ್ಪಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟವಶಾತ್ ವೈದ್ಯರು ಮಹಿಳೆ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Scroll to Top