ಕಾಸರಗೋಡು: ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ



(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.27. ನಾಪತ್ತೆಯಾಗಿದ್ದ ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾದ ಘಟನೆ ಪಲ್ಲಿಕೆರೆ ಪೂಚೆಕ್ಕಾಡ್ ಬಳಿ ನಡೆದಿದೆ. ಮುಹಮ್ಮದ್ ಶಹೀಮ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಈತ ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರನಾಗಿದ್ದ.







ಶಹೀಮ್ ಶಾಲೆಯಿಂದ ಬೇಗನೇ‌ ಬಂದಿದ್ದ. ಆದರೆ ಮನೆಗೆ ತೆರಳಿಲ್ಲ. ಸಂಜೆ ಶಾಲಾ ಸಮಯ‌ ಕಳೆದರೂ‌ ಮಗು ಮನೆಗೆ ಬರದಿದ್ದಾಗ ಪೋಷಕರು ವಿಚಾರಿಸಿದ್ದಾರೆ.ಈ ವೇಳೆ‌ ಶಹೀಮ್‌ ಶಾಲೆಯಿಂದ ಮಧ್ಯಾಹ್ನ‌ ತೆರಳಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಬಳಿಕ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ರೈಲ್ವೇ ಹಳಿಯಲ್ಲಿ‌ ಬಾಲಕನ ಮೃತದೇಹ ಪತ್ತೆಯಾಗಿದೆ.






error: Content is protected !!
Scroll to Top