ಅಪ್ಪನಿಗೆ ಚಾಕು ತೋರಿಸಿ ಬೆದರಿಸಿ ಹಣ ದರೋಡೆ.!! ➤ 1.14 ಕೋಟಿ ರೂ.ಹಣ ವಸೂಲಿ ಮಾಡಿದ 24 ವರ್ಷದ ಮಗ



(ನ್ಯೂಸ್ ಕಡಬ) newskadaba.com ಮುಂಬೈ, ಜ.13. ಅಪ್ಪನಿಗೆ ಚಾಕು ತೋರಿಸಿ, ಹೆದರಿಸಿ ಮಗ 1.14 ಕೋಟಿ ರೂಪಾಯಿ ಪೀಕಿದ ಘಟನೆ ಬಾಂದ್ರಾದಲ್ಲಿ ವರದಿಯಾಗಿದೆ.
ಬಾಂದ್ರಾದ ಪಾರಿಜತ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ರಾಹುಲ್ ದೌಂಡ್ಕರ್(24) ಎಂಬಾತ ತನ್ನ ಪೋಷಕರಿಗೆ ಬೆದರಿಕೆ ಹಾಕಿ 1 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ್ದಾನೆ.








66 ವರ್ಷದ ಮಾರುತಿ ದೌಂಡ್ಕರ್ ಎಂಬವರು ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೋಷಕರ ದೂರಿನ ಮೇರೆಗೆ ಮುಂಬೈ ಪೊಲೀಸರು ರಾಹುಲ್ನನ್ನು ಬಂಧಿಸಿದ್ದಾರೆ. ಆರೋಪಿಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.






error: Content is protected !!
Scroll to Top