(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ಜ.07. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದ ರೋಗಿಯನ್ನು ಪರೀಕ್ಷಿಸಲು ವೈದ್ಯರು ತೆರಳಿದ್ದರು. ಈ ವೇಳೆ ವೈದ್ಯರೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ದಾಳಿಯಿಂದ ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಯತ್ನಿಸಿದ ಮತ್ತೊಬ್ಬ ವೈದ್ಯನ ಬೆರಳಿಗೆ ಗಾಯಗಳಾಗಿವೆ. ಆರೋಪಿ ಸೂರಜ್ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ.
ಆರೋಪಿ ಎರಡು ದಿನಗಳ ಹಿಂದೆ ತನ್ನ ಬಳಿ ಚಾಕುವನ್ನು ಇಟ್ಟುಕೊಂಡಿದ್ದಾನೆ. ಚಿಕಿತ್ಸೆ ನೀಡಲು ವೈದ್ಯರು ಬಂದಾಗ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.