ಉದ್ಘಾಟನೆಗೂ ಮೊದಲೇ ಕುಸಿದು ಬಿದ್ದ ಸೇತುವೆ



(ನ್ಯೂಸ್ ಕಡಬ) newskadaba.com ಪಾಟ್ನಾ , ಡಿ 19 :  ಬಿಹಾರದ ಬೇಗುಸರಾಯ್ ಜಿಲ್ಲೆಯ ಸಾಹೇಬ್ ಪುರ್ ಕಮಾಲ್ ನಲ್ಲಿ ಬುರ್ಹಿ ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಒಂದು ಭಾಗವು ಕುಸಿದು ನದಿಗೆ ಬಿದ್ದಿದೆ ಎಂದು ವರದಿ ತಿಳಿಸಿದೆ.





ಸೇತುವೆಯನ್ನು 13 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ  ನಿರ್ಮಿಸಲಾಗಿದೆ. ಹಾಗೂ ಇನ್ನಷ್ಟೇ ಉದ್ಘಾಟನೆಯಾಗಬೇಕಿತ್ತು. ಈ ಘಟನೆಯ ವೇಳೆ ಸೇತುವೆ ಮೇಲೆ ಯಾರೂ ಇರಲಿಲ್ಲ. ಸೇತುವೆ ಕೆಲವು ದಿನಗಳ ಹಿಂದೆ ಬಿರುಕು ಬಿಟ್ಟಿತ್ತು. 2 ಹಾಗೂ 3 ನೇ ಕಂಬಗಳ ನಡುವಿನ ಸೇತುವೆಯ ಮುಂಭಾಗ ಕುಸಿದಿದೆ ಎನ್ನಲಾಗಿದೆ.






error: Content is protected !!
Scroll to Top