(ನ್ಯೂಸ್ ಕಡಬ) newskadaba.com ಉತ್ತರಖಂಡ್, ಡಿ. 13. ತನ್ನ ಮಗಳ ಮೆಹೆಂದಿಯಲ್ಲಿ ಸಂಬಂಧಿಕರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಧುವಿನ ತಂದೆ ಮೃತಪಟ್ಟ ಘಟನೆ ಉತ್ತರಖಂಡ್ ನಲ್ಲಿ ನಡೆದಿದೆ.
ಮಗಳ ಮದುವೆಯ ಸಂತಸದಲ್ಲಿದ್ದ ತಂದೆ ಸಂಬಂಧಿಕರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕುಸಿದುಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಅದಾಗಲೇ ಹೃದಯಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.