ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ➤ಇಬ್ಬರು ಮೃತ, 47 ಮಂದಿಗೆ ಗಾಯ



(ನ್ಯೂಸ್ ಕಡಬ) newskadaba.com ಮುಂಬೈ, ಡಿ.12. ಗುಡ್ಡಗಾಡು ಪ್ರದೇಶದಲ್ಲಿ ಶಾಲಾ ಪ್ರವಾಸದ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, 47 ಮಂದಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪರ್ವತ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.







ಪಿಕ್ ನಿಕ್ ಮುಗಿಸಿಕೊಂಡು ಹಿಂದಿರುಗುವಾಗ ಈ ಘಟನೆ ನಡೆದಿದ್ದು, ಬ್ರೇಕ್ ವೈಫಲ್ಯದಿಂದ ಚಾಲಕನ ನಿಯಂತ್ರಣ ತಪ್ಪಿ ಅವಘಢ ನಡೆದಿದೆ ಎಂದು ತಿಳಿದುಬಂದಿದೆ.






ಮುಂಬೈ ಸಬ್-ಅರ್ಬನ್ ಪ್ರದೇಶದ ಚೆಂಬೂರಿನ ಕೋಚಿಂಗ್ ಕ್ಲಾಸ್ ಒಂದರ ಸುಮಾರು 49 ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ತೆರಳಿದ್ದು, ವಿದ್ಯಾರ್ಥಿಗಳೆಲ್ಲರೂ 10 ನೇ ತರಗತಿಯವರು ಎಂದು ತಿಳಿದುಬಂದಿದೆ.

ಗಾಯಾಳು ಚಾಲಕ ಮತ್ತು ವಿದ್ಯಾರ್ಥಿಗಳನ್ನು ಲೋನವಾಲ ಮತ್ತು ಖೊಪೊಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ 17 ಮತ್ತು 16 ವರ್ಷದ ಇಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

 

 

 

 

error: Content is protected !!
Scroll to Top