ಇಸ್ರೋ ನೂತನ ಅಧ್ಯಕ್ಷರಾಗಿ ಕೇರಳ ಮೂಲದ ಎಸ್.ಸೋಮನಾಥ್ ನೇಮಕ

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 13. ಹಿರಿಯ ರಾಕೆಟ್ ವಿಜ್ಞಾನಿ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ವಿದ್ಯಾರ್ಥಿ ಎಸ್. ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ ಕೇಂದ್ರ ಸರಕಾರ ಆಯ್ಕೆ ಮಾಡಿದೆ.‌

ಇಸ್ರೋ ಹಾಲಿ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರದ ಅವಧಿ ಮುಗಿದ ಬಳಿಕ ಕೇರಳ ಮೂಲದ ಎಸ್.ಸೋಮನಾಥ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಿಎಸ್ಎಲ್ ವಿ ಎಂಕೆ-3 ಉಡಾವಣಾ ವಾಹಕವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಸ್ರೋ ಅಧ್ಯಕ್ಷ ಮಾತ್ರವಲ್ಲದೇ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

Also Read  ತಾರತಮ್ಯ- ಜಾತಿ ಹಿಂಸಾಚಾರ ಪ್ರಕರಣ: ದೇಶದಲ್ಲಿ ಮೊದಲ ಬಾರಿಗೆ 98 ಮಂದಿಗೆ ಸಾಮೂಹಿಕ ಶಿಕ್ಷೆ ಪ್ರಕಟ

error: Content is protected !!
Scroll to Top