ಮಲಯಾಳಂ ಖ್ಯಾತ ನಟಿಯ ನಕಲಿ ಸೆಕ್ಸ್ ವೀಡಿಯೋ ವೈರಲ್ ➤ ವೀಡಿಯೋ ಬಗ್ಗೆ ಠಾಣೆಯ ಮೆಟ್ಟಿಲೇರಿದ ನಟಿ ರಮ್ಯಾ ಸುರೇಶ್

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಜೂ.03. ಮಲಯಾಳಂನ ಖ್ಯಾತ ನಟಿ ರಮ್ಯಾ ಸುರೇಶ್ ಅವರ ನಕಲಿ ಸೆಕ್ಸ್ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಅಶ್ಲೀಲ ವೀಡಿಯೋವೊಂದಕ್ಕೆ ರಮ್ಯಾ ಸುರೇಶ್ ಮುಖವನ್ನು ಎಡಿಟ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ವಿಡಿಯೋ ವೈರಲ್​ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆ ಸಂತ್ರಸ್ತ ನಟಿಯು ಆಲಪ್ಪುಝ ಪೊಲೀಸ್​ ವರಿಷ್ಠಾಧಿಕಾರಿಗೆ ಹಾಗೂ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಮ್ಯಾ ಸುರೇಶ್, ಈ ಅಶ್ಲೀಲ ವೀಡಿಯೋವು ನನ್ನ ಮಾನಸಿಕ ಅನಾರೋಗ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ ಎಂದು ಅಳಲನ್ನು ವ್ಯಕ್ತಪಡಿಸಿದ್ದಾರೆ.

Also Read  ಉಪ್ಪಿನಂಗಡಿ: ಟ್ರಾಕ್ಟರ್ ಹಾಗೂ ಬೈಕ್ ನಡುವೆ ಢಿಕ್ಕಿ ➤ ಸವಾರ ಗಂಭೀರ

 

 

 

error: Content is protected !!
Scroll to Top