ಬೆಂಗಳೂರು: ಶಾಸಕ ಎಸ್.ಅಂಗಾರ ಅವರ ನೂತನ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 04. ಬಂದರು, ಮೀನುಗಾರಿಕಾ ಸಚಿವರಾದ ಎಸ್.ಅಂಗಾರರಿಗೆ ಇಲ್ಲಿನ ವಿಧಾನಸೌಧದ ಕೊಠಡಿ ನಂಬರ್ 252 ಮತ್ತು 253 ‘ಎ’ ಆ ಕೊಠಡಿಗಳಲ್ಲಿ ನಿಗದಿಯಾಗಿದ್ದು, ಸಚಿವರ ಕಚೇರಿಯು ಇಂದು ಶುಭಾರಂಭಗೊಂಡಿತು.


ಇದರ ವಾಸ್ತುಪೂಜೆಯನ್ನು ಸುಬ್ರಹ್ಮಣ್ಯ ಪುರೋಹಿತ ಶ್ರೀಕಾಂತ ಮಯ್ಯ ಹಾಗೂ ತಂಡದವರು ಫೆ.03ರ ರಾತ್ರಿ ಕಚೇರಿಯಲ್ಲಿ ನೆರವೇರಿಸಿದರು ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಹಿರಿಯ ನಾಯಕರಾದ ಎ.ವಿ.ತೀರ್ಥರಾಮ, ಕೃಷ್ಣ ಶೆಟ್ಟಿ ಕಡಬ, ಬೆಂಗಳೂರು ಕಚೇರಿ ಸಹಾಯಕ ರಾಧಾಕೃಷ್ಣ ರಾವ್, ಸಚಿವರ ಪತ್ನಿ ಶ್ರೀಮತಿ ವೇದಾವತಿ ಅಂಗಾರ, ಪುತ್ರ ಗೌತಮ್, ಪುತ್ರಿ ಪೂಜಾ ಉಪಸ್ಥಿತರಿದ್ದರು.

Also Read  ಫಲಾನುಭವಿಗಳ ಸಮ್ಮೇಳನ- ಕಡಬ, ಪುತ್ತೂರು ವ್ಯಾಪ್ತಿಯ ಬಸ್ ಸಂಚಾರದಲ್ಲಿ ವ್ಯತ್ಯಯ ➤ ಸಾರ್ವಜನಿಕರು ಸಹಕರಿಸುವಂತೆ ಮನವಿ

error: Content is protected !!
Scroll to Top