ಉಡುಪಿ: ದ್ವಿಚಕ್ರ ವಾಹನ ಸ್ಕಿಡ್- ಸವಾರ ಮೃತ್ಯು



(ನ್ಯೂಸ್ ಕಡಬ) newskadaba.com ಉಡುಪಿ, ಫೆ. 01. ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ರಾಪ್ಟ್ರೀಯ ಹೆದ್ದಾರಿ ಸಂತೆಕಟ್ಟೆ ಸೇತುವೆ ಬಳಿ ನಡೆದಿದೆ.





ಮೃತ ಯುವಕನನ್ನು ಕೊಳಲಗಿರಿಯ ಆಸೀಫ್(19) ಎಂದು ಗುರುತಿಸಲಾಗಿದೆ. ಈತ ನಿನ್ನೆ ರಾತ್ರಿ ಉಡುಪಿ ಕಡೆಯಿಂದ ಕೊಳಲಗಿರಿಗೆ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದ ವೇಳೆ ಸಂತೆಕಟ್ಟೆ ಸೇತುವೆಯಲ್ಲಿ ದ್ವಿಚಕ್ರ ವಾಹನ ಸ್ಕೀಡ್ ಆಗಿದ್ದು, ಪರಿಣಾಮ ಆಸೀಫ್ ಸೇತುವೆಯ ತಡೆಗೋಡೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






error: Content is protected !!
Scroll to Top