ಬೆಳ್ಳಂಬೆಳಗ್ಗೆ ಟ್ರಕ್ ಹರಿದು 13 ಮಂದಿಯ ದುರ್ಮರಣ ➤ ಫುಟ್‌ಪಾತ್ ನಲ್ಲಿ ಮಲಗಿದ್ದವರು ಮಸಣ ಸೇರಿದರು



(ನ್ಯೂಸ್ ಕಡಬ) newskadaba.com ಗುಜರಾತ್, ಜ.19. ಭೀಕರ ರಸ್ತೆ ಅಪಘಾತಕ್ಕೆ ಸೂರತ್ ನಗರ ಸಾಕ್ಷಿಯಾಗಿದ್ದು, ಫುಟ್ ಪಾತ್ ಮೇಲೆ ಮಲಗಿದ್ದವರ ಮೇಲೆ ಲಾರಿಯೊಂದು ಹರಿದ ಘಟನೆ ಮಂಗಳವಾರ ಬೆಳಗಿನ ಜಾವ ಸೂರತ್‌ನಲ್ಲಿ ನಡೆದಿದೆ.





ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹಾಗೂ ಟ್ರಕ್ ನಡುವೆ ಸೂರತ್ ನಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಪುಟ್ ಪಾತ್ ಮೇಲೆ ಸಂಚರಿಸಿದೆ. ಈ ವೇಳೆಯಲ್ಲಿ ಪುಟ್ ಪಾತ್ ಮೇಲೆ ಮಲಗಿದ್ದ 18ಕ್ಕೂ ಅಧಿಕ ಪಾದಚಾರಿಗಳ ಮೇಲೆ ಟ್ರಕ್ ಹರಿದಿದ್ದು, 13 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸೂರತ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top