ಭ್ರಷ್ಟಾಚಾರ ಆರೋಪದಡಿ ತನ್ನ ಕೇಂದ್ರ ಕಛೇರಿಯ ಮೇಲೆಯೇ ದಾಳಿ ನಡೆಸಿದ ಸಿಬಿಐ…!



(ನ್ಯೂಸ್ ಕಡಬ) newskadaba.com ನವದೆಹಲಿ, ಜ. 16. ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಲಂಚ ಪಡೆಯುತ್ತಿದ್ದ ಆರೋಪದ ಮೇರೆಗೆ ಸಿಬಿಐ ಅಧಿಕಾರಿಗಳು ತನ್ನ ಕೇಂದ್ರ ಕಚೇರಿಯ ಮೇಲೆಯೇ ದಾಳಿ ನಡೆಸಿದ್ದಾರೆ.





ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯೊಂದರಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿಡಿಎಸ್.ಪಿ ಸೇರಿದಂತೆ ನಾಲ್ವರ ಮೇಲೆ ಸಿಬಿಐ ದೂರು ದಾಖಲಿಸಿಕೊಂಡಿದೆ. ಸಿಬಿಐ ಡಿವೈಎಸ್ ಪಿ ಆರ್.ಕೆ ರಿಷಿ, ಆರ್.ಕೆ ಸಾಂಗ್ವಾನ್, ಸ್ಟೆನೊಗ್ರಾಫರ್ ಸಮೀರ್ ಕುಮಾರ್ ಸಿಂಗ್ ಮತ್ತು ಇನ್ಸ್‌ಪೆಕ್ಟರ್ ಕಪಿಲ್ ಧಂಕಡ್ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.






error: Content is protected !!
Scroll to Top