ದಕ್ಷಿಣ ಕನ್ನಡದ ನಾಡ ಕಚೇರಿಗಳಲ್ಲಿ ಕೆಲಸ ಬಂದ್: ಸರ್ವರ್ ಸಮಸ್ಯೆಯಿಂದ ಕಂಗಾಲಾದ ನಾಗರಿಕರು



(ನ್ಯೂಸ್‌ ಕಡಬ) newskadaba.com, ಜು.28 ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬಂಟ್ವಾಳ ಹಾಗೂ ಬೆಳ್ತಂಗಡಿ ಸೇರಿದಂತೆ ಹಲವು ನಾಡ ಕಚೇರಿಗಳಲ್ಲಿ ಕಳೆದ 10 ದಿನಗಳಿಂದ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆ ತೀವ್ರಗೊಂಡಿದ್ದು, ಸಾರ್ವಜನಿಕ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ.
ತಾಂತ್ರಿಕ ದೋಷದಿಂದಾಗಿ ಜಾತಿ, ಆದಾಯ, ನಿವಾಸ ಸೇರಿದಂತೆ ವಿವಿಧ ಅಗತ್ಯ ಪ್ರಮಾಣಪತ್ರಗಳ ವಿತರಣೆ ಸಂಪೂರ್ಣ ವಿಳಂಬವಾಗಿದೆ. ಸಾರ್ವಜನಿಕರು ಗಂಟೆಗಟ್ಟಲೆ ಸರದಿಯಲ್ಲಿ ಕಾದರೂ ಕೆಲಸವಾಗದೆ ಬರಿಗೈಯಲ್ಲಿ ಮನೆಗೆ ಹಿಂದಿರುಗುವಂತಾಗಿದೆ.







ವಿದ್ಯಾರ್ಥಿವೇತನ, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಹಾಗೂ ಬ್ಯಾಂಕ್ ಸಾಲಗಳಿಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಸಿಗದೆ ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ರೈತರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.






ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿದಿನ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ನಾಡ ಕಚೇರಿಗಳಲ್ಲಿನ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ಸಾರ್ವಜನಿಕರಿಗೆ ನಿರಂತರ ಮತ್ತು ಅಡೆತಡೆಯಿಲ್ಲದ ಸೇವೆ ಒದಗಿಸಬೇಕೆಂದು ಸ್ಥಳೀಯರು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

error: Content is protected !!
Scroll to Top