ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆ..! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜ. 14. ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ಹೊರದಬ್ಬಿ ಹತ್ಯೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ‌.

ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇವರು ಸೋಮವಾರದಂದು ಪತಿ ಹಾಗೂ ತನ್ನ ಮೊದಲ ಗಂಡನಿಗೆ ಜನಿಸಿದ 7 ವರ್ಷದ ಮಗಳೊಂದಿಗೆ ರೈಲಿನಲ್ಲಿ ಚಲಿಸುತ್ತಿದ್ದ ವೇಳೆ ದಂಪತಿ ರೈಲಿನ ಬಾಗಿಲಿನ ಹತ್ತಿರ ನಿಂತಿದ್ದರು. ಈ ವೇಳೆ ಪತಿಯು ಪತ್ನಿಯನ್ನೇ ಹೊರದಬ್ಬಿದ್ದಾನೆ. ಇದನ್ನು ಗಮನಿಸಿದ ರೈಲಿನಲ್ಲಿದ್ದ ಮಹಿಳಾ ಪ್ರಯಾಣಿಕರೋರ್ವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪತಿಯನ್ನು ಬಂಧಿಸಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಕಡಬ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಓರ್ವನ ಬಂಧನ

error: Content is protected !!
Scroll to Top