ಕೊರೋನಾ ಕಾಲದಲ್ಲಿ ನರ್ಸ್‌ ಆಗಿದ್ದ ನಟಿಗೆ ಪಾರ್ಶ್ವವಾಯು.!



(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.23: ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡಿದ್ದ ನಟಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ನರ್ಸ್ ಆಗಿಯೂ ಕೆಲಸ ಮಾಡಿದ್ದ ನಟಿ ಶಿಖಾ ಮಲ್ಹೋತ್ರಾ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟ್ರೋಕ್ ನಟಿಯ ದೇಹದ ಬಲಭಾಗದ ಮೇಲೆ ಭಾರೀ ಪರಿಣಾಮ ಬೀರಿದ್ದು, ಎದ್ದು ಓಡಾಡುವುದು ಸಾಧ್ಯವಾಗುತ್ತಿಲ್ಲ.







ಶಿಖಾ ಮಲ್ಹೋತ್ರಾ ಅವರನ್ನು ಮುಂಬೈ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತಮ್ಮ ತಾಯಿಯೊಂದಿಗೆ ಇರುವ ಪೋಟೋ ಹಂಚಿಕೊಂಡಿದ್ದಾರೆ.ತಾನು ಚೇತರಿಸಿಕೊಳ್ಳುತ್ತಿರುವುದಾಗಿ ನಟಿ ತಿಳಿಸಿದ್ದಾರೆ.ತಾನು ಯಾವಾಗ ಮೊದಲಿನಂತೆ ಎದ್ದು ಓಡಾಡುತ್ತೇನೆ ಎಂಬುದು ಯಾವಾಗ ಸಾಧ್ಯವಾಗಲಿದೆ ಎನ್ನುವುದು ಗೊತ್ತಿಲ್ಲ,ನಮನ್ನ ಹೊಸ ಚಿತ್ರ ಕಾಂಚಲಿ ಬಗ್ಗೆ ಚಿಂತೆಯಾಗಿದ್ದು ನಿಮ್ಮೆಲ್ಲರ ಬೆಂಬಲ ಬೇಕು ಎಂದಿದ್ದಾರೆ. ಶಿಖಾ ರವರಿಗೆ ಡಿ.10ರಂದು ಪಾರ್ಶ್ವವಾಯುಗೆ ತುತ್ತಾಗಿದ್ದು ಅವರನ್ನು ತಕ್ಷಣವೇ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಖಾ, ಶಾರುಖ್ ಖಾನ್ ಅಭಿನಯದ ಫ್ಯಾನ್ ಚಿತ್ರದಲ್ಲಿ ನಟಿಸಿದ್ದಾರೆ.ಸದ್ಯ ಇವರ ಆರೋಗ್ಯ ಬೇಗಾ ಸುಧಾರಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.






 

error: Content is protected !!
Scroll to Top