(ನ್ಯೂಸ್ ಕಡಬ) newskadaba.com ಮುಂಬೈ ಅ. 30: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಇಂದು ಹಸೆಮಣೆ ಏರಲಿದ್ದಾರೆ. ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಜೊತೆ ಕಾಜಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಮದುವೆ ನಂತರವೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವುದಾಗಿ ಅವರು ಭರವಸೆ ನೀಡಿದ್ದಾರೆ.
ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕಾಜಲ್, ಉದ್ಯಮಿ ಗೌತಮ್ ಕಿಚ್ಲು ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತು. ಕೆಲವೇ ದಿನಗಳ ಹಿಂದೆ ಅವರು ತಮ್ಮ ಮದುವೆ ಸುದ್ದಿಯನ್ನು ಅನೌನ್ಸ್ ಮಾಡಿದ್ರು. ಈಗಾಗಲೇ ಮೆಹೆಂದಿ ಹಾಗೂ ಅರಿಶಿಣ ಶಾಸ್ತ್ರ ಸೇರಿದಂತೆ ವಿವಾಹಪೂರ್ವ ಸಮಾರಂಭಗಳು ನೆರವೇರಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಕಾಜಲ್ರನ್ನ ಮದುಮಗಳಾಗಿ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಅಂದ್ಹಾಗೆ ಇಂದು ಮುಂಬೈನಲ್ಲಿ ಕಾಜಲ್ ಮದುವೆ ನೆರವೇರಲಿದೆ.