?ಲಾಕ್ ಡೌನ್ ‌ಉಲ್ಲಂಘಿಸುವವರ ವಿರುದ್ಧ ಮುಂದುವರಿದ ಕಾರ್ಯಾಚರಣೆ ➤ ಕಡಬ ಪೊಲೀಸರಿಂದ ಒಂದೇ ದಿನ 21 ಕಾರುಗಳು ಸೀಝ್

(ನ್ಯೂಸ್ ಕಡಬ) newskadaba.com ಕಡಬ, ಎ.09. ಕಳೆದ ಕೆಲವು ದಿನಗಳಿಂದ ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿದ್ದ ಹಲವು ಖಾಸಗಿ ಕಾರುಗಳನ್ನು ವಶಪಡಿಸಿಕೊಂಡಿದ್ದ ಕಡಬ ಪೊಲೀಸರು, ಗುರುವಾರದಂದು ಕಾರ್ಯಾಚರಣೆ ನಡೆಸಿ 21 ಖಾಸಗಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಲಾಕ್ ಡೌನ್ ವೇಳೆಯಲ್ಲಿ ಖಾಸಗಿ ವಾಹನಗಳು ರಸ್ತೆಗಿಳಿಯಬಾರದು ಎಂಬ ಸೂಚನೆಯಿದ್ದರೂ, ಜಿಲ್ಲಾಧಿಕಾರಿಯವರ ಆದೇಶವನ್ನು ಮೀರಿ ಸಾರ್ವಜನಿಕರು ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದರು. ಅಂತಹವರಿಗೆ ಡ್ರಿಲ್ ನಡೆಸಿರುವ ಪೊಲೀಸರು ಕಾನೂನು ಉಲ್ಲಂಘಿಸಿದ ಹಲವು ಖಾಸಗಿ ವಾಹನಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದರು. ಗುರುವಾರದಂದು ಆತೂರು, ಕೊಯಿಲ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಮತ್ತೆ ಹಲವರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ.

error: Content is protected !!

Join the Group

Join WhatsApp Group