ಉದ್ಯೋಗಾವಕಾಶ: ಆಗಸ್ಟ್ 31ರಂದು ಸಂದರ್ಶನ



(ನ್ಯೂಸ್ ಕಡಬ) newskadaba.com ಆ. 27. ಮೆಡ್ ಪ್ಲಸ್ ಕಂಪೆನಿಯ ವತಿಯಿಂದ ಬೆಂಗಳೂರಿನಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್, ಫಾರ್ಮಾಸಿ ಎಡ್,ಸಿ.ಎಸ್.ಎ(ಕಸ್ಟಮರ್ ಸರ್ವಿಸ್ ಅಸೋಸಿಯೆಟ್/ ಫಾರ್ಮಾಸಿ ಅಸಿಸ್ಟೆಂಟ್) ಹುದ್ದೆಗೆ ನೇರ ಸಂದರ್ಶನ ಆಗಸ್ಟ್ 31ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30ರ ವರೆಗೆ ಪಡೀಲ್ ಜಿಲ್ಲಾಡಳಿತ ಕೇಂದ್ರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.







ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ, ಹಾಗೂ ಡಿ.ಫಾರ್ಮಾ/ಬಿ.ಫಾರ್ಮಾ (ಪಿ.ಸಿ.ಐ. ಸರ್ಟಿಫಿಕೇಟ್) ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಕಂಪನಿ ವತಿಯಿಂದ ಪಿ.ಎಫ್, ಇ.ಎಸ್.ಐ, ಬೋನಸ್, ಗ್ರಾಚುಟಿ ಮತ್ತು ಸೇಲ್ಸ್/ ಟಾರ್ಗೆಟ್ ಇನ್ಸೆಂಟಿವ್ ಇರುತ್ತದೆ.






 

ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top