ರಸ್ತೆ ಅಪಘಾತಕ್ಕೆ ಮಹಿಳೆ ಬಲಿ, ಏಳು ಮಂದಿಗೆ ಗಾಯ



ಆಂಧ್ರಪ್ರದೇಶ, ಜ.14: ಆಟೊ ರಿಕ್ಷಾ ಮತ್ತು ಟಾಟಾ ಮ್ಯಾಜಿಕ್ ಮಧ್ಯೆ ಢಿಕ್ಕಿ ಸಂಭವಿಸಿ ಮಹಿಳೆ ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಶ್ರೀಕಾಕುಲಮ್ ಜಿಲ್ಲೆಯ ಮಡ್ಡಿ ರಾಮುಡು ಪೇಟಾ ಗ್ರಾಮದಲ್ಲಿ ನಡೆದಿದೆ.





ಅಪಘಾತಕ್ಕೆ ಬಲಿಯಾದ ಮಹಿಳೆಯನ್ನು ಜಡ್ಡು ಕೃಷ್ಣವೇಣಿ(46) ಎಂದು  ಗುರುತಿಸಲಾಗಿದೆ. ಈಕೆ ತನ್ನ ತವರು ಮನೆಯಾದ ಪಾಲಕೊಂಡಾ ಮಂಡಲ್ ಬಳಿಯಿರುವ ಎನ್ ಕೆ ರಾಜಾಪುರನ್ ಗ್ರಾಮಕ್ಕೆ ತೆರಳುತ್ತಿದ್ದಳು ಎಂದು ತಿಳಿದುಬಂದಿದೆ. ಟಾಟಾ ಮ್ಯಾಜಿಕ್ ವಾಹನದಲ್ಲಿ ವಿಜಯವಾಡದಿಂದ ತನ್ನ ತವರು ಗ್ರಾಮಕ್ಕೆ ಕೃಷ್ಣವೇಣಿ ಪ್ರಯಾಣ ಬೆಳೆಸಿದ್ದರು. ಎಂ ಆರ್ ಪೇಟಾ ಗ್ರಾಮದ ಬಳಿ ಹಾದುಹೋಗುವಾಗ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಟಾಟಾ ಮ್ಯಾಜಿಕ್ ವಾಹನ ಮುಖಾಮುಖಿ ಢಿಕ್ಕಿಯಾಗಿದೆ. ಪರಿಣಾಮವಾಗಿ ಕೃಷ್ಣವೇಣಿ ಸೇರಿ ಏಳು ಮಂದಿ ಗಂಭೀರ ಗಾಯಗೊಂಡಿದ್ದರು. ಗಾಯಗೊಂಡವರನ್ನು ಕೂಡಲೇ ಪಾಲಕೊಂಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಕೃಷ್ಣವೇಣಿ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ.






Nk Kukke

error: Content is protected !!
Scroll to Top