(ನ್ಯೂಸ್ ಕಡಬ) newskadaba.com, ಆ.26: ದೇಶದ ರಾಜಧಾನಿ ನವದೆಹಲಿಯಲ್ಲಿ ಹಂದಿ ಜ್ವರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳು 2,308 ಕ್ಕೆ ತಲುಪಿವೆ.ದೇಶದಲ್ಲಿ ಯಾವುದೇ ಹೊಸ ಅಥವಾ ಮಾರಕ ವೈರಸ್ ರೂಪಾಂತರ ಪತ್ತೆಯಾಗಿಲ್ಲ. ಇದು ಮಳೆಗಾಲ ಹಾಗೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ವರವಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ICMR ಮತ್ತು WHO ತಜ್ಞರು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಆರೋಗ್ಯ ಸಚಿವ ಡಾ. ಪಂಕಜ್ ಸಿಂಗ್ ಅವರು NDMC, MCD ಹಾಗೂ ಸೇನಾ ಕಂಟೋನ್ಮೆಂಟ್ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಬೆಡ್‌ಗಳು, ಐಸೋಲೇಶನ್ ವಾರ್ಡ್‌ಗಳು, ವೈದ್ಯರು ಹಾಗೂ ಔಷಧಿಗಳ ದಾಸ್ತಾನು ಲಭ್ಯವಿದೆ.
ವರದಿಯಾದ ಸುಮಾರು 3 ಸಾವಿರ ಇನ್ಫ್ಲುಯೆನ್ಸ ರೋಗಿಗಳಲ್ಲಿ ಹೆಚ್ಚಿನವರು ಸಾಮಾನ್ಯ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ರೋಗಿ ಐಸಿಯು ಅಥವಾ ವೆಂಟಿಲೇಟರ್‌ನಲ್ಲಿಲ್ಲ ಹಾಗೂ ಯಾವುದೇ ಸಾವು ಸಂಭವಿಸಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.








