ಮುಂಬಯಿಯಲ್ಲಿ ರೈಲು ಅವಘಡ ► ಕಡಬದ ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com ಕಡಬ, ಅ.17. ಕಡಬದ ವ್ಯಕ್ತಿಯೋರ್ವರು ರೈಲು ಅವಘಡಕ್ಕೀಡಾಗಿ ಮೃತಪಟ್ಟ ದಾರುಣ ಘಟನೆ ಮಂಗಳವಾರ ರಾತ್ರಿ ಮುಂಬಯಿಯಲ್ಲಿ ನಡೆದಿದೆ.





ಮೃತರನ್ನು ಕಡಬ ತಾಲೂಕಿನ ಬಂಟ್ರ ಗ್ರಾಮದ ಮುಂಡ್ರಾಡಿ ನಿವಾಸಿ ಶ್ರೀನಿವಾಸ್ ರೈ ಎಂಬವರ ಸಹೋದರ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ಮುಂಬಯಿಯಲ್ಲಿ ಇಂಜಿನಿಯರ್ ವೃತ್ತಿಯಲ್ಲಿದ್ದ ಹರಿಪ್ರಸಾದ್ ಮಂಗಳವಾರ ಸಂಜೆ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹುಟ್ಟೂರಿಗೆ ಆಗಮಿಸುವವರಿದ್ದು, ಪನ್ವೇಲ್ ಸಮೀಪದ ಪೇನ್ ಎಂಬಲ್ಲಿ ರೈಲು ಅವಘಡದಿಂದಾಗಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.






error: Content is protected !!
Scroll to Top