(ನ್ಯೂಸ್ ಕಡಬ) newskadaba.com, ಜು.16 ಬೆಂಗಳೂರು: ಮನೆಯಿಂದಲೇ ಕೆಲಸ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸಬಹುದು ಎಂದು ಆಮಿಷ ಒಡ್ಡಿ ನಿರುದ್ಯೋಗಿಗಳು, ಗೃಹಿಣಿಯರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿರುವ ಸೈಬರ್ ಜಾಲ ರಾಜ್ಯದಲ್ಲಿ ತೀವ್ರವಾಗಿ ಸಕ್ರಿಯವಾಗಿದೆ.
ಸಾಮಾಜಿಕ ಜಾಲತಾಣಗಳು, ವಾಟ್ಸಾಪ್ ಗ್ರೂಪ್‌ಗಳು ಹಾಗೂ ನಕಲಿ ವೆಬ್‌ಸೈಟ್‌ಗಳ ಮೂಲಕ ಅಗರಬತ್ತಿ/ಮೇಣದಬತ್ತಿ ಪ್ಯಾಕಿಂಗ್, ಡೇಟಾ ಎಂಟ್ರಿ, ಪುಸ್ತಕ ಬರೆಯುವುದು ಮತ್ತು ಉತ್ಪನ್ನಗಳ ತಯಾರಿಕೆಯಂತಹ ಕೆಲಸಗಳ ಜಾಹೀರಾತು ನೀಡಿ ಆಕರ್ಷಿಸಲಾಗುತ್ತಿದೆ.
ಉದ್ಯೋಗ ನೀಡುವ ನೆಪದಲ್ಲಿ ನೋಂದಣಿ ಶುಲ್ಕ, ಭದ್ರತಾ ಠೇವಣಿ ಹಾಗೂ ತರಬೇತಿ ಶುಲ್ಕದ ಹೆಸರಿನಲ್ಲಿ ಮೊದಲೇ ಸಾವಿರಾರು ರೂಪಾಯಿಗಳನ್ನು ಪಡೆದು ವಂಚಕರು ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ತುಮಕೂರು: ಅಗರಬತ್ತಿ, ಮೇಣದಬತ್ತಿ ಪ್ಯಾಕಿಂಗ್ ಹೆಸರಲ್ಲಿ ಮುಂಗಡ ಹಣ ಪಡೆದು 600ಕ್ಕೂ ಹೆಚ್ಚು ಜನರಿಗೆ ವಂಚನೆ.
ಹಾವೇರಿ: ಮನೆಯಲ್ಲೇ ಪ್ಯಾಕಿಂಗ್ ಮಾಡುವ ಕೆಲಸದ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ದೋಚಿದ ಜಾಲ.ಹೊಸಕೋಟೆ: ಪ್ಯಾಕಿಂಗ್ ಉದ್ಯೋಗಕ್ಕಾಗಿ ಮುಂಗಡ ಹಣ ನೀಡಿ ವಂಚನೆಗೊಳಗಾದ ಮಹಿಳೆಯರು.
ಸಣ್ಣ ಮೊತ್ತದ ಹಣ ಕಳೆದುಕೊಂಡವರು ಮಾನಹಾನಿಗೆ ಹೆದರಿ ದೂರು ನೀಡಲು ಹಿಂಜರಿಯುತ್ತಿರುವುದು ಈ ವಂಚಕರಿಗೆ ವರವಾಗಿದೆ.







