2027ಕ್ಕೆ ಹಳಿ ಮೇಲೇರಲಿದೆ ದೇಶದ ಮೊದಲ ಬುಲೆಟ್ ರೈಲು ಸಚಿವ ಅಶ್ವಿನಿ ವೈಷ್ಣವ್ ಪ್ರಕಟಣೆ!

(ನ್ಯೂಸ್ ಕಡಬ) newskadaba.com ಜು. 13. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನ ಮೊದಲ ಹಂತವು ಮುಂದಿನ ವರ್ಷ (2027) ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಮೊದಲಿಗೆ ಗುಜರಾತ್‌ನ ಸೂರತ್–ಬಿಲಿಮೋರಾ ನಡುವೆ ಸಂಚಾರ ಆರಂಭವಾಗಲಿದ್ದು, ನಂತರ ವಾಪಿ–ಸೂರತ್, ವಾಪಿ–ಅಹಮದಾಬಾದ್, ಅಹಮದಾಬಾದ್–ಠಾಣೆ ಹಾಗೂ ಅಹಮದಾಬಾದ್–ಮುಂಬೈ ಮಾರ್ಗಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವಅಶ್ವಿನಿ ವೈಷ್ಣವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೈದರಾಬಾದ್ ಅನ್ನು ಪ್ರಮುಖ ಹೈಸ್ಪೀಡ್ ರೈಲು ಹಬ್ ಆಗಿ ಪರಿವರ್ತಿಸಲು ಯೋಜಿಸಲಾಗಿದ್ದು, ಅಲ್ಲಿಂದ ಪುಣೆ, ಚೆನ್ನೈ ಮತ್ತು ಬೆಂಗಳೂರಿಗೆ ಮೂರು ಹೊಸ ಬುಲೆಟ್ ರೈಲು ಕಾರಿಡಾರ್‌ ಗಳನ್ನು ನಿರ್ಮಿಸಲಾಗುವುದು.

ಮುಂಬೈ-ಪುಣೆ (170 ಕಿ.ಮೀ) ಪ್ರಯಾಣದ ಸಮಯ 48 ನಿಮಿಷಗಳಿಗೆ ಹಾಗೂ ಪುಣೆ-ಹೈದರಾಬಾದ್ (500 ಕಿ.ಮೀ) ಪ್ರಯಾಣದ ಸಮಯ 2 ಗಂಟೆ 8 ನಿಮಿಷಗಳಿಗೆ ಇಳಿಕೆಯಾಗಲಿದೆ. ಇದರಿಂದ ಪ್ರಮುಖ ನಗರಗಳು ಒಂದೇ ಆರ್ಥಿಕ ವಲಯವಾಗಿ ಬೆರೆಯಲಿವೆ.

ಈ ಯೋಜನೆಯಡಿ ದೇಶದ 261 ರೈಲ್ವೆ ನಿಲ್ದಾಣಗಳನ್ನು ಈಗಾಗಲೇ ಪುನರಾಭಿವೃದ್ಧಿ ಮಾಡಲಾಗಿದೆ. ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್‌ ಫಾರ್ಮ್‌ಗಳ ಮೇಲೆ ಬೃಹತ್ ಏರ್ ಕಾನ್‌ ಕೋರ್ಸ್ ನಿರ್ಮಿಸಲಾಗುತ್ತಿದೆ. ತೆಲಂಗಾಣ ರಾಜ್ಯದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಬಾರಿ 5,400 ಕೋಟಿ ರೂ.ಗಳ ಬಜೆಟ್ ಹಂಚಿಕೆ ಮಾಡಲಾಗಿದೆ.

Scroll to Top