ಅಮೆರಿಕ-ಇರಾನ್ ಶಾಂತಿ ಮಾತುಕತೆ ವಿಫಲ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ.2ರಷ್ಟು ದಿಢೀರ್ ಏರಿಕೆ!



(ನ್ಯೂಸ್‌ ಕಡಬ) newskadaba.com,  ಜೂ.22  ಸ್ವಿಟ್ಜರ್ಲೆಂಡ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಉನ್ನತ ಮಟ್ಟದ ಶಾಂತಿ ಮಾತುಕತೆಯಿಂದ ಇರಾನ್ ನಿಯೋಗ ಹೊರನಡೆದ ಬೆನ್ನಲ್ಲೇ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 2 ರಷ್ಟು ಏರಿಕೆ ಕಂಡಿದೆ.







ಅಂತರರಾಷ್ಟ್ರೀಯ ಮಾನದಂಡದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82.30 ಡಾಲರ್ (ಅಂದಾಜು ₹7,700) ತಲುಪಿದ್ದರೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ (WTI) ತೈಲದ ಬೆಲೆ ಬ್ಯಾರೆಲ್‌ಗೆ 78 ಡಾಲರ್ (ಅಂದಾಜು ₹7,300) ಗಡಿ ದಾಟಿದೆ.






ಅತ್ಯಂತ ಸೂಕ್ಷ್ಮ ಹಂತದಲ್ಲಿದ್ದ ಶಾಂತಿ ಮಾತುಕತೆಯ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಮಿಲಿಟರಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇರಾನ್ ನಿಯೋಗವು ವೇದಿಕೆಯಿಂದ ಹೊರನಡೆದಿದೆ.ಈ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದ್ದು, ತೈಲ ದರ ದಿಢೀರ್ ಏರಿಕೆಯಾಗಲು ನೇರ ಕಾರಣವಾಗಿದೆ.

error: Content is protected !!
Scroll to Top