ಅರಬ್ಬೀ ಸಮುದ್ರದಲ್ಲಿ ಮಾನವೀಯತೆ ಮೆರೆದ ಪಾಕ್‌: ಭಾರತದ ಹಡಗು ರಕ್ಷಣೆ



(ನ್ಯೂಸ್‌ ಕಡಬ) newskadaba.com, ಮೇ.07: ಅರಬ್ಬೀ ಸಮುದ್ರದಲ್ಲಿ ಸಿಲುಕಿದ್ದ ಭಾರತೀಯ ಹಡಗನ್ನು ಪಾಕಿಸ್ತಾನ ನೌಕಾಪಡೆರಕ್ಷಿಸಿದೆ.







ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಭಾರತೀಯ ಹಡಗಿನ ತುರ್ತು ಕರೆಗೆ ಪಾಕಿಸ್ತಾನಿ ನೌಕಾಪಡೆ ಸ್ಪಂದಿಸಿದೆ. ಸಿಬ್ಬಂದಿಗೆ ಆಹಾರ, ವೈದ್ಯಕೀಯ ಮತ್ತು ಇತರ ತುರ್ತು ಸಹಾಯವನ್ನು ನೀಡಿದೆ ಎಂದು ವರದಿಯಾಗಿದೆ.ಎಂವಿ ಗೌತಮ್ ಹೆಸರಿನ ಈ ಹಡಗು ಒಮಾನ್‌ನಿಂದ ಭಾರತಕ್ಕೆ ವಾಪಸ್‌ ಆಗುವಾಗ ತಾಂತ್ರಿಕ ವೈಫಲ್ಯವನ್ನು ಅನುಭವಿಸಿ ಸಮುದ್ರದಲ್ಲಿ ಸಿಲುಕಿಕೊಂಡಿತ್ತು ಎಂದು ಪಾಕಿಸ್ತಾನಿ ಮಿಲಿಟರಿ ತಿಳಿಸಿದೆ.






ಮುಂಬೈನಲ್ಲಿರುವ ಸಾಗರ ರಕ್ಷಣಾ ಮತ್ತು ಸಮನ್ವಯ ಕೇಂದ್ರವು ಪಾಕಿಸ್ತಾನದ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯವನ್ನು ಕೋರಿತು. ನಂತರ ಪಾಕಿಸ್ತಾನ ನೌಕಾಪಡೆಯು ಆರು ಭಾರತೀಯರು ಮತ್ತು ಓರ್ವ ಇಂಡೋನೇಷ್ಯಾದ ಸಿಬ್ಬಂದಿ ರಕ್ಷಿಸಿದೆ. ಮನವಿಗೆ ಸ್ಪಂದಿಸಿದ ಪಾಕಿಸ್ತಾನ ನೌಕಾಪಡೆಯು ರಕ್ಷಣಾ ಕಾರ್ಯಾಚರಣೆ ನಡೆಸಲು ಪಿಎಂಎಸ್ಎಸ್ ಕಾಶ್ಮೀರ್ ಎಂಬ ಹಡಗನ್ನು ನಿಯೋಜಿಸಿತ್ತು.

error: Content is protected !!
Scroll to Top