ಕಾಸರಗೋಡು: ಅಶ್ವಿನಿ ಕ್ಲಿನಿಕ್‌ನಲ್ಲಿ ಅಗ್ನಿ ಅವಘಡ; ಸುಮಾರು ಲಕ್ಷಾಂತರ ರೂ. ನಷ್ಟ



(ನ್ಯೂಸ್‌ ಕಡಬ) newskadaba.com,  ಸೆ.23  ಕಾಸರಗೋಡು: ನಗರದ ಅಶ್ವಿನಿ ನಗರದಲ್ಲಿರುವ ಚರ್ಮ ಹಾಗೂ ಮಕ್ಕಳ ತಪಾಸಣಾ ಕ್ಲಿನಿಕ್ ಒಂದರಲ್ಲಿ ಅಗ್ನಿ ಅವಘಡ ಉಂಟಾಗಿ ಸುಮಾರು 25 ಲಕ್ಷ ರೂ. ನಷ್ಟವಾದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. ಸೋಮವಾರ ತಡರಾತ್ರಿ 11.30 ರ ಸುಮಾರಿಗೆ ಕ್ಲಿನಿಕ್ ನಲ್ಲಿ ಹೊಗೆ ಕಂಡುಬಂದ ಹಿನ್ನಲೆಯಲ್ಲಿ ಸಮೀಪದ ಹೊಟೇಲ್ ಕಾರ್ಮಿಕರು ಅಗ್ನಿ ಶಾಮಕ ದಳದ ಸಿಬ್ಬಂದಿ ಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯ ತಪ್ಪಿಸಿದರು.







4 ಕೋಣೆಗಳನ್ನು ಹೊಂದಿರುವ ಕ್ಲಿನಿಕ್ ನೊಳಗೆ ದಟ್ಟ ಹೊಗೆಯು ಕಾರ್ಯಾಚರಣೆಗೆ ಅಡಚಣೆಯಾದರೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಕ್ಲಿನಿಕ್ ನಲ್ಲಿದ್ದ ಫ್ಯಾನ್, ಕಂಪ್ಯೂಟರ್ ಗಳು, ಫರ್ನಿಚರ್, ಫ್ರಿಡ್ಜ್, ಕ್ಲಿನಿಕ್ ಉಪಕರಣಗಳು, ಔಷಧಿಗಳು, ಎ.ಸಿ ಮೊದಲಾದವು ಬೆಂಕಿಗಾಹುತಿಯಾಗಿದೆ.






ಈ ಕಟ್ಟಡದಲ್ಲಿ ಹೊಟೇಲ್, ಕಂಪ್ಯೂಟರ್ ಸಂಸ್ಥೆ, ದಂತ ಚಿಕಿತ್ಸಾಲಯ, ಹಣಕಾಸು ಸಚಿವಾಲಯ, ಲಾಡ್ಜಿಂಗ್ ಮೊದಲಾದ 15 ಸಂಸ್ಥೆಗಳು ಈ ಕಾರ್ಯಾಚರಿಸುತ್ತಿದೆ. ಈ ಕಟ್ಟಡದ ಕೆಳ ಅಂತಸ್ತಿನಲ್ಲಿ ಕ್ಲಿನಿಕ್ ಕಾರ್ಯಾಚರಿಸುತ್ತಿದೆ. ಸುಮಾರು 25 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

error: Content is protected !!
Scroll to Top