ರಿಕ್ಕಿಕೇಜ್ ಸಂಗೀತ ನಿರ್ದೇಶನದ ಚಿತ್ರ ಆಸ್ಕರ್‌ಗೆ ಪ್ರವೇಶ



o  

(ನ್ಯೂಸ್‌ ಕಡಬ) newskadaba.com ಸೆ.06  ಮುಂಬೈ:  3  ಬಾರಿ ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಅವರ ಸಂಗೀತ ನಿರ್ದೇಶನದ ಸಿನಿಮಾ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಅಂಗಳಕ್ಕೆ ಪ್ರವೇಶ ಪಡೆದಿದೆ. ಈ ಖುಷಿಯನ್ನ ಖುದ್ದು ರಿಕ್ಕಿ ಕೇಜ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.





“ಪಾಪಾ ಬುಕಾ” ಇದು ಪಪುವಾ ನ್ಯೂಗಿನಿಯಾದ ಮೊದಲ ಅಧಿಕೃತ ಆಸ್ಕರ್ ಪ್ರವೇಶ ಪಡೆದ ಚಿತ್ರವಾಗಿದೆ. ಈ ಚಿತ್ರಕ್ಕೆ ರಿಕ್ಕಿ ಕೇಜ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. 3 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಡಾ.ಬಿಜು ನಿರ್ದೇಶಿಸಿದ `ಪಾಪಾ ಬುಕಾ’ ಚಿತ್ರವು ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ಆಯ್ಕೆಯಾಗಿದೆ.






2ನೇ ಮಹಾಯುದ್ಧದ ಸಂದರ್ಭದಲ್ಲಿ ಭಾರತ ಹಾಗೂ ಪಪುವಾ ನ್ಯೂಗಿನಿಯಾ ಮಧ್ಯದ ತ್ಯಾಗ ಮತ್ತು ಮಾನವೀಯತೆಯನ್ನು ವೃದ್ಧ ಯೋಧ ಪಾಪಾ ಬುಕಾ ಎಂಬ ಹೆಸರಿನ ವ್ಯಕ್ತಿ ಹೇಳುವ ಕಥೆ ಇದಾಗಿದೆ. ಇಬ್ಬರು ಭಾರತೀಯ ಇತಿಹಾಸಕಾರರಿಗೆ ಪಾಪಾ ಬುಕಾ ಮಾರ್ಗದರ್ಶನ ನೀಡುವ ಕಥೆಯನ್ನು ಹೊಂದಿದೆ. ಹೀಗಾಗಿ ಇದು ಭಾರತಕ್ಕೂ ಕನೆಕ್ಟ್ ಆಗುತ್ತದೆ. ಹಿಂದಿ, ಇಂಗ್ಲೀಷ್‌ನಲ್ಲಿ ಚಿತ್ರ ತಯಾರಾಗಿದೆ.

ಕರ್ನಾಟಕದ ಮೂಲದ ರಿಕ್ಕಿ ಕೇಜ್ ತಮ್ಮ ಚಿತ್ರ ಅಧಿಕೃತವಾಗಿ ಆಸ್ಕರ್ ಪ್ರವೇಶ ಪಡೆದಿರುವ ವಿಚಾರ ಹಂಚಿಕೊಂಡು ಹೆಮ್ಮೆಪಟ್ಟಿದ್ದಾರೆ.

error: Content is protected !!
Scroll to Top