ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಪೋಟ: ಹಲವರು ನಾಪತ್ತೆ

(ನ್ಯೂಸ್‌ ಕಡಬ) newskadaba.com ಆ. 29: ಉತ್ತರಾಖಂಡದ ರುದ್ರಪ್ರಯಾಗ ಹಾಗೂ ಚಮೋಲಿಯಲ್ಲಿ ಭಾರೀ ಮೇಘಸ್ಪೋಟ ಸಂಭವಿಸಿದ್ದು, ಹಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಮೇಘಸ್ಪೋಟದಿಂದ ಹಠಾತ್ಪ್ರವಾಹ ಉಂಟಾಗಿದ್ದು, ದೇವಲ್ ಮೊಪಾಟಾ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ. 15 ಅಧಿಕ ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ರುದ್ರಪ್ರಯಾಗ ಜಿಲ್ಲೆಯಲ್ಲಿ ಅಲಕನಂದಾ ಹಾಗೂ ಮಂದಾಕಿನಿ ನದಿಗಳ ಸಂಗಮವಾಗಿ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿದ್ದು, ಹನುಮಾನ್ದೇವಸ್ಥಾನ ಮುಳುಗಡೆಯಾಗಿದೆ.

ಶ್ರೀನಗರ ಹಾಗೂ ರುದ್ರಪ್ರಯಾಗದ ನಡುವಿನ ಬದರಿನಾಥ ಹೆದ್ದಾರಿ ಮುಳುಗಡೆಯಾದ ಹಿನ್ನೆಲೆ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Scroll to Top