ಮೋದಿ ನಿವೃತ್ತಿ ಚರ್ಚೆಗೆ ತೆರೆ ಎಳೆದ ಮೋಹನ್‌ ಭಾಗವತ್‌



(ನ್ಯೂಸ್‌ ಕಡಬ) newskadaba.com, ಆ.29: 75 ವರ್ಷಕ್ಕೆ ನಿವೃತ್ತಿ ಕಡ್ಡಾಯವಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನಿವೃತ್ತಿ ವಿಚಾರದ ಚರ್ಚೆಗೆ ಆರ್ಎಸ್ಎಸ್ಸಂಘದ ಚಾಲಕ ಮೋಹನ್ಭಾಗವತ್ತೆರೆ ಎಳೆದಿದ್ದಾರೆ.





ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ನಲ್ಲಿ 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಲ್ಲದೇ, 75ನೇ ವಯಸ್ಸಿನಲ್ಲಿಯೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವಿಚಾರದ ಬಗ್ಗೆ ಚರ್ಚೆ ಎದ್ದಿತ್ತು. ಇದೀಗ ಮೋಹನ್ಭಾಗವತ್ಅವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.






ಆರ್ಎಸ್ಎಸ್ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು,  75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ಎಂದಿಗೂ ನಾನು ಹೇಳಿಲ್ಲ. ಹೇಳಿಕೆಯ ಮುಖೇನ ಪ್ರಧಾನಿ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ.

ಆರ್ಎಸ್ಎಸ್ಹಾಗೂ ಬಿಜೆಪಿ ಮಧ್ಯೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಯಾವುದೇ ರೀತಿಯಾದ ಸಂಘರ್ಷವಿಲ್ಲ. ದೇಶದ ಅಭಿವೃದ್ದಿಗಾಗಿ ಎರಡು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.

error: Content is protected !!
Scroll to Top