ಕ್ಯಾಲಿಕಟ್: ಸ್ವಿಫ್ಟ್ ಕಾರು – ಟೆಂಪೋ ಟ್ರಾವೆಲ್ಲರ್ ನಡುವೆ ಭೀಕರ ಅಪಘಾತ ► ಬೆಳ್ಳಾರೆಯ ಆರು ಮಂದಿ ಯುವಕರು ಗಂಭೀರ

(ನ್ಯೂಸ್ ಕಡಬ) newskadaba.com ಕ್ಯಾಲಿಕಟ್, ಎ.09. ಸ್ವಿಫ್ಟ್ ಕಾರು ಹಾಗೂ ಟೆಂಪೋ ಟ್ರಾವೆಲ್ಲರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಆರು ಮಂದಿ ಯುವಕರು ಗಾಯಗೊಂಡ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ಸೋಮವಾರದಂದು ನಡೆದಿದೆ.

ಘಟನೆಯಲ್ಲಿ ಬೆಳ್ಳಾರೆ ನಿವಾಸಿಗಳಾದ ಸಾಬಿತ್, ಮಹಮ್ಮದ್ ಆಶಿಕ್, ಮಹಮ್ಮದ್ ಸಫ್ವಾನ್, ಮಹಮ್ಮದ್ ಅಲಿ, ಜಾಬಿರ್ ಹಾಗೂ ಕಬೀರ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಕ್ಯಾಲಿಕಟ್ ನ ಮಿನ್ಸಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಬೆಳ್ಳಾರೆಯ ಯುವಕರು ಕಾರಿನಲ್ಲಿ ತೆರಳುತ್ತಿದ್ದಾಗ ಕ್ಯಾಲಿಕಟ್ ಸಮೀಪ ಟೆಂಪೋ ಟ್ರಾವೆಲ್ಲರ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Scroll to Top