(ನ್ಯೂಸ್ ಕಡಬ) newskadaba.com ಜು. 03. ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಇದರಲ್ಲಿ ಭಾರತದ ಹಲವು ಬಗೆಯ ಐಸ್ ಕ್ರೀಂ ಗಳು ಸ್ಥಾನ ಪಡೆದಿದ್ದು, ಅದರಲ್ಲಿ ನಮ್ಮ ಮಂಗಳೂರಿನ ಐಸ್ ಕ್ರೀಮ್ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಮಂಗಳೂರಿನ ‘ಗಡ್-ಬಡ್’ ಐಸ್ ಕ್ರೀಮ್ ವಿಶ್ವದ ಟಾಪ್ 100 ಐಸ್ ಕ್ರೀಮ್ ಗಳ ಪೈಕಿ 33ನೇ ಸ್ಥಾನವನ್ನು ಗಿಟ್ಟಿಸಿಕೊಂಡು ಜಾತಿಯನ್ನು ಪಡೆದುಕೊಂಡಿದೆ. ಐಸ್ ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಬೇಸಿಗೆ ಸಮಯದಲ್ಲಂತೂ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರೂ ಕೂಡ ಬೇಸಿಗೆ ಐಸ್ ಕ್ರೀಮ್ ತಿನ್ನಲು ಪರಿತಪಿಸುತ್ತಾರೆ. ಇದೀಗ ಗಡ್ ಬಡ್ ಐಸ್ ಕ್ರೀಂ ತನ್ನ ಸ್ಥಾನವನ್ನು ರಾಷ್ಟ್ರಮಟ್ಟದಲ್ಲೂ ಪರಿಚಯಿಸಿಕೊಂಡಿದೆ.
ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನ ಪಬ್ಬಾಸ್ ರೆಸ್ಟೋರೆಂಟ್ ನ “ಗಡ್ ಬಡ್” ಐಸ್ ಕ್ರೀಮ್ ಅನ್ನು ಗಾಜಿನ ಲೋಟದೊಳಗೆ ಸರ್ವ್ ಮಾಡಲಾಗುತ್ತದೆ. ಇದು ವೆನಿಲ್ಲಾ, ಸ್ಟ್ರಾಬೆರಿ, ಜೆಲ್ಲಿ, ಹಣ್ಣುಗಳು, ಡ್ರೈ ಫ್ರೂಟ್ಸ್ ಗಳು ಮತ್ತು ಸಿರಪ್ ಲೇಯರ್ ಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಚಮಚ ತಿನ್ನುವಾಗಲೂ ವಿಭಿನ್ನ ರುಚಿಯನ್ನು ನೀಡುತ್ತದೆ. ಅದಕ್ಕಾಗಿಯೇ ಇದು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ ಮತ್ತು ಇದು ಟಾಪ್ 100ರ ಪೈಕಿ 33 ನೇ ಸ್ಥಾನವನ್ನು ಪಡೆದುಕೊಂಡಿದೆ.










