ವಿಮಾನ ದುರಂತ- 3 ಹಿರಿಯ ಅಧಿಕಾರಿಗಳ ಅಮಾನತು ಮಾಡುವಂತೆ DGCA ಆದೇಶ



(ನ್ಯೂಸ್ ಕಡಬ) newskadaba.com ಜೂ. 21. ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾದ 3 ಹಿರಿಯ ಅಧಿಕಾರಿಗಳನ್ನು ವಜಾಗೊಳಿಸುವಂತೆ ಡಿಜಿಸಿಎ ನಿರ್ದೇಶನ ನೀಡಿದೆ.







 

ವಿಮಾನ ಸಿಬ್ಬಂದಿಯ ವೇಳಾಪಟ್ಟಿಯಲ್ಲಿ ಗಂಭೀರ ಮತ್ತು ಪುನರಾವರ್ತಿತ ತಪ್ಪುಗಳಿಂದಾಗಿ DGCA ಈ ಕ್ರಮ ಕೈಗೊಂಡಿದೆ. ಈ ಪ್ರಕರಣ ಸಂಬಂಧ ಇದೀಗ DGCA ಏರ್ ಇಂಡಿಯಾ ವಿರುದ್ಧ ಮೊದಲ ಕ್ರಮ ಕೈಗೊಂಡಿದ್ದು, ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.






 

ಜೂನ್ 20 ರಂದು ಡಿಜಿಸಿಎ ಹೊರಡಿಸಿದ ಆದೇಶದ ಪ್ರಕಾರ, ಏರ್ ಇಂಡಿಯಾ ತನ್ನ ವಿಮಾನ ಸಿಬ್ಬಂದಿಯ ವೇಳಾಪಟ್ಟಿ ಮತ್ತು ಕಾರ್ಯಾಚರಣೆಯಲ್ಲಿ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ. ವಿಮಾನಯಾನ ನಿಯಂತ್ರಕವು ಈ ಅಧಿಕಾರಿಗಳ ವಿರುದ್ಧ ವಿಳಂಬವಿಲ್ಲದೆ ಆಂತರಿಕ ಶಿಸ್ತಿನ ಕ್ರಮಗಳನ್ನು ಪ್ರಾರಂಭಿಸಬೇಕು ಮತ್ತು ಅಂತಹ ಪ್ರಕ್ರಿಯೆಗಳ ಫಲಿತಾಂಶವನ್ನು 10 ದಿನಗಳಲ್ಲಿ ವರದಿ ಮಾಡಬೇಕು ಎಂದು ಆದೇಶಿಸಿದೆ.

error: Content is protected !!
Scroll to Top