(ನ್ಯೂಸ್ ಕಡಬ) newsksdaba.com ಜೂ. 19. ಇಂದು ದೇಶದ ವಿವಿಧ ಭಾಗದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಹಲವಾರು ಕಾರಣಗಳಿಗೆ ಈ ಚುನಾವಣೆಗಳು ಏರ್ಪಟ್ಟಿದ್ದು, ಬೆಳಿಗ್ಗೆಯಿಂದ ಮತದಾನ ಪ್ರಾರಂಭವಾಗಿದೆ.
ಎಲೆಕ್ಷನ್ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಇದೇ ತಿಂಗಳ 23 ರಂದು ಫಲಿತಾಂಶ ಹೊರಬರಲಿದೆ.
ಕೇರಳದ ನೀಲಂಬೂರ್, ಪಂಜಾಬ್ ನ ನಲೂಧಿಯಾನ ವೆಸ್ಟ್, ಪಶ್ಚಿಮ ಬಂಗಾಳದ ಕಲಿಗಂಜ್ ಹಾಗೂ ಗುಜರಾತ್ ನ ಕಡಿ ಮತ್ತು ವಿಸವಾದರ್ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.










