ಪ್ರಿಯಕರನೊಂದಿಗೆ ಹೋಟೆಲ್ ರೂಂ ನಲ್ಲಿ ಸಿಕ್ಕಿಬಿದ್ದ ಪತ್ನಿ..!



(ನ್ಯೂಸ್ ಕಡಬ) newskadaba.com ಜೂ. 19. ಯುವತಿಯೋರ್ವಳು ಪ್ರಿಯಕರನೊಂದಿಗೆ ಹೋಟೆಲ್‌ನ ರೂಂ ನಲ್ಲಿ ಮೋಜು ಮಾಡುತ್ತಿರುವ ವೇಳೆ ಸಡನ್‌ ಆಗಿ ಪತಿಯ ಆಗಮಿಸಿದ್ದು, ಆಘಾತಕ್ಕೊಳಗಾದ ಪತ್ನಿ ತಕ್ಷಣವೇ ಹೋಟೆಲ್‌ನ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಸದ್ಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.







ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಮೋಜು ಮಾಡಲು ಹೋಟೆಲ್‌ ರೂಮ್ ಗೆ ತಲುಪಿದ್ದು, ಆದರೆ ಆಕೆಯ ಪತಿ ಪೊಲೀಸರೊಂದಿಗೆ ಆಕೆಯ ಹಿಂದಿನಿಂದ ಬರುತ್ತಿರುವುದು ಅವಳ ಗಮನಕ್ಕೆ ಬಂದಿರಲಿಲ್ಲ. ಯಾವಾಗ ತನ್ನ ಪತಿ ಪೊಲೀಸರೊಂದಿಗೆ ಬರುತ್ತಿರುವುದನ್ನು ಮಹಿಳೆ ನೋಡಿದಲೋ ತಕ್ಷಣವೇ ಆಕೆ ಹೋಟೆಲ್‌ ನ ಹಿಂಬದಿ ಛಾವಣಿಯಿಂದ ಹಾರಿ ಅಲ್ಲಿಂದ ಪರಾರಿಯಾಗಿದ್ದಾಳೆ.






ಮಹಿಳೆಯೊಬ್ಬಳು ಹೋಟೆಲ್‌ ನ ಹಿಂಬದಿಯ ಛಾವಣಿಯಿಂದ ಜಿಗಿಯುವ ವೀಡಿಯೊವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದು, ಸದ್ಯ ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹೋಟೆಲ್‌ (Room) ನ ಹಿಂಬದಿಯ ಛಾವಣಿಯಿಂದ ಜಿಗಿದು ಪರಾರಿಯಾಗುವ ವೇಳೆ ಮಹಿಳೆ ಮುಖಕ್ಕೆ ವಸ್ತ್ರ ಕಟ್ಟಿಕೊಂಡಿರುವುದನ್ನು ನೀವೂ ವಿಡಿಯೋದಲ್ಲಿ ಕಾಣಬಹುದಾಗಿದೆ.

error: Content is protected !!
Scroll to Top