ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸತ್ತಿಕಲ್ಲು ಶಾಲೆಗೆ ಬೆಂಚ್ ಮತ್ತು ಡೆಸ್ಕ್ ವಿತರಣೆ

(ನ್ಯೂಸ್ ಕಡಬ) newskadaba.com ಡಿ. 24. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ವಲಯದ ಕೆದಿಲ ಕಾರ್ಯಕ್ಷೇತ್ರದ ಸತ್ತಿಕ್ಕಲ್ಲು ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಿಂದ 5 ಡೆಸ್ಕ್ ಮತ್ತು 5 ಬೆಂಚನ್ನು ಶಾಲಾ ಮುಖ್ಯೋಪಾಧ್ಯಯರಾದ ಮಂಜುನಾಥ ಮತ್ತು ಅಧ್ಯಾಪಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಿಯಾಝ್, ಉಪಾಧ್ಯಕ್ಷರಾದ ಶ್ವೇತಾ ಇವರಿಗೆ ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾರವರು ವಿತರಿಸಿದರು.

ಈ ಸಂದರ್ಭದಲ್ಲಿ ಕೆದಿಲ “ಬಿ” ಒಕ್ಕೂಟದ ಅಧ್ಯಕ್ಷರಾದ ಮೀನಾಕ್ಷಿ, ಉಪಾಧ್ಯಕ್ಷರಾದ ಸುಂದರ, ಸೇವಾ ಪ್ರತಿನಿಧಿಯಾದ ಜಯಂತಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕೆದಿಲದ ಸದಸ್ಯರಾದ ಜಗದೀಶ ಹಾಗೂ ಗಿರೀಶ ಉಪಸ್ಥಿತರಿದ್ದರು.

Scroll to Top