5.6 ಲಕ್ಷ ಮಂದಿ ಭಾರತೀಯರು ಶ್ರೀಮಂತ ದೇಶಗಳಿಗೆ ವಲಸೆ

(ನ್ಯೂಸ್ ಕಡಬ) newskadaba.com . 14. ಅಮೆರಿಕ, ಇಂಗ್ಲೆಂಡ್ ಮತ್ತು ಕೆನಡಾದಂಥ ದೇಶಗಳಿಗೆ ವಲಸೆ ಹೋಗುವ ಪ್ರವೃತ್ತಿ ಭಾರತೀಯರಲ್ಲಿ ಹೆಚ್ಚಿದ್ದು, 2022ರಲ್ಲಿ ಒಟ್ಟು 5.6 ಲಕ್ಷ ಮಂದಿ ಈ ಸಮೃದ್ಧ ದೇಶಗಳಿಗೆ ವಲಸೆ ಹೋಗಿದ್ದಾರೆ.
ಓಇಸಿಡಿ (ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ) ದೇಶಗಳ ಹೊಸ ವಲಸೆಗಾರರಾಗಿ, ಅಂತರಾಷ್ಟ್ರೀಯ ವಿದ್ಯಾರ್ಥಿಗಳಾಗಿ, ಪೌರತ್ವ ಪಡೆದವರ ಪಟ್ಟಿಯಲ್ಲಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಆದರೆ ಈ ದೇಶಗಳು ಪ್ರಸ್ತುತ ಅನುಸರಿಸುತ್ತಿರುವ ರಕ್ಷಣಾತ್ಮಕ ನೀತಿಯಿಂದಾಗಿ ಈ ಮುಕ್ತ ಮಾರ್ಗ ಕಿರಿದಾಗುತ್ತಿದೆ. 2022ರಲ್ಲಿ 5.6 ಲಕ್ಷ ಮಂದಿ ಓಇಸಿಡಿ ತೆರಳಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 35ರಷ್ಟು ಅಧಿಕ. ಓಇಸಿಡಿ ದೇಶಗಳ ವಲಸೆಗಾರರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು, ಚೀನಾದಿಂದ 3.2 ಲಕ್ಷ ಮಂದಿ ವಲಸೆ ಬಂದಿದ್ದಾರೆ.

 

Scroll to Top