ನಿಗೂಢ ಕಾಯಿಲೆಗೆ ಒಂದೇ ತಿಂಗಳಲ್ಲಿ 17 ಮಕ್ಕಳು ಬಲಿ..!

(ನ್ಯೂಸ್ ಕಡಬ) newskadaba.com ಜೈಪುರ, ಅ. 21. ನಿಗೂಢ ಕಾಯಿಲೆಯಿಂದ ಭಾನುವಾರ ಎರಡು ವರ್ಷದ ಗಂಡುಮಗು ಮೃತಪಟ್ಟಿದ್ದು, ಕಳೆದ 30 ದಿನಗಳಲ್ಲಿ ರಾಜಸ್ಥಾನದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಕೋಟ್ರಾ ಮತ್ತು ಉದಯಪುರ ಜಿಲ್ಲೆಗಳಲ್ಲಿ ಈ ಕಾಯಿಲೆಗೆ ಬಲಿಯಾದ ಮಕ್ಕಳ ಸಂಖ್ಯೆ 17ಕ್ಕೇರಿದೆ.

ಜ್ವರ, ಶೀತ ಮತ್ತು ಕಫದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ರೋಗ ಲಕ್ಷಣ ಕಾಣಿಸಿಕೊಂಡ ಎರಡು ಮೂರು ದಿನಗಳಲ್ಲೇ ಕೊನೆಯುಸಿರೆಳೆದಿದೆ. ಇದು ಗ್ರಾಮದಲ್ಲಿ ಕಳೆದ 30 ದಿನಗಳಿಂದಲೂ ಆಗುತ್ತಿದೆ. ಈ ಗ್ರಾಮದಲ್ಲಿ 17 ಮಕ್ಕಳು ಮೃತಪಟ್ಟಿವೆ. ಅಸ್ವಸ್ಥತೆ ಕಾಣಿಸಿಕೊಂಡ ನಾಲ್ಕು ದಿನಗಳ ಒಳಗಾಗಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಘಾಟಾ ಪಂಚಾಯತ್ ಸರಪಂಚ್ ನಿಕಾರಾಂ ಗರಾಸಿಯಾ ಹೇಳಿದ್ದಾರೆ. ಈ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಆ ಬಳಿಕ ಉನ್ನತ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

 

Scroll to Top