ನಿಮ್ಮ ಮೊಬೈಲ್ ಡೇಟಾ ಬೇಗ ಖಾಲಿ ಆಗುತ್ತಾ? ಈ ಟ್ರಿಕ್ ಬಳಸಿ…ಡೇಟಾ ಉಳಿಸಿ

(ನ್ಯೂಸ್ ಕಡಬ) newskadaba.com ಅ. 15. ಕೆಲವು ಸ್ಮಾರ್ಟ್​ ಫೋನ್​ಗಳಲ್ಲಿ ಕೆಲವು ಆ್ಯಪ್​ಗಳು ಸ್ವಯಂಚಾಲಿತವಾಗಿ ಅಪ್​ಡೇಟ್ ಆಗುತ್ತಿರುತ್ತವೆ. ಇದರಿಂದಾಗಿ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು.

ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸಾಪ್ ನಲ್ಲಿ ಸಿಕ್ಕಸಿಕ್ಕ ಫೋಟೋ ಹಾಗೂ ವಿಡಿಯೋಗಳು ಆಟೋಮ್ಯಾಟಿಕ್ ಆಗಿ ಡೌನ್‌ ಲೋಡ್ ಮಾಡುವುದು. ವಾಟ್ಸಾಪ್ ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್​ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು ವೇಗವಾಗಿ ಪೂರ್ಣಗೊಳಿಸುತ್ತದೆ.


ನಾವು ಸಾಮಾನ್ಯವಾಗಿ ನಮ್ಮ ಪ್ರಯಾಣದ ಸಮಯದಲ್ಲಿ OTT ಪ್ಲಾಟ್‌ ಫಾರ್ಮ್‌ ಗಳು ಅಥವಾ ಯೂಟ್ಯೂಬ್​ನಲ್ಲಿ ವಿಡಿಯೋಗಳನ್ನು ಸ್ಟ್ರೀಮ್ ಮಾಡುತ್ತೇವೆ. ಆದರೆ, ಅದರ ಹೊರತಾಗಿ ವೈಫೈ ಎಲ್ಲಿಯಾದರೂ ಲಭ್ಯವಿದ್ದಾಗ ಕೆಲವು ವಿಡಿಯೋಗಳನ್ನು ಡೌನ್​ಲೋಡ್ ಮಾಡಿಟ್ಟರೆ ಆಫ್‌ಲೈನ್ ಮೋಡ್‌ನಲ್ಲಿ ವೀಕ್ಷಿಸಿ ಮೊಬೈಲ್ ಫೋನ್ ಡೇಟಾವನ್ನು ಉಳಿಸಬಹುದು. ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಕೆ ತುಂಬಾ ಹೆಚ್ಚಾಗಿದೆ. ಇವುಗಳು ಹೆಚ್ಚಿನ ಡೇಟಾವನ್ನು ಸಹ ತಿನ್ನುತ್ತದೆ. ಆದರೆ, ಇಂತಹ ಆಯಪ್​ಗಳನ್ನು ಆಫ್ ಲೈನ್ ಮೋಡ್​ನಲ್ಲಿ ಬಳಸಬೇಕೇ ಹೊರತು ಆನ್ ಲೈನ್ ಮೋಡ್​ನಲ್ಲಿ ಅಲ್ಲ. ಇದು ಇಂಟರ್ನೆಟ್ ಡೇಟಾವನ್ನು ಸಾಧ್ಯವಾದಷ್ಟು ಉಳಿಸುತ್ತದೆ.

Also Read  ಬೆಳ್ಮ ಗ್ರಾಮ ಸಭೆ


ಆಂಡ್ರಾಯ್ಡ್ ಫೋನ್‌ಗಳು ಡೇಟಾ ಉಳಿತಾಯ ಮೋಡ್ ಎಂಬ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ವೈಶಿಷ್ಟ್ಯದ ಸಹಾಯದಿಂದ, ಸಾಧ್ಯವಾದಷ್ಟು ಡೇಟಾವನ್ನು ಉಳಿಸಲು ಅವಕಾಶವಿದೆ.

error: Content is protected !!
Scroll to Top