ಚಂದ್ರಯಾನ-3 ಯಶಸ್ವಿ – ಇಸ್ರೋ ಅಧ್ಯಕ್ಷರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಅ. 15. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಅಂತಾರಾಷ್ಟ್ರೀಯ ಖಗೋಳ ಶಾಸ್ತ್ರೀಯ ಒಕ್ಕೂಟವು (ಐಎಎಫ್) ವಿಶ್ವ ಬಾಹ್ಯಾಕಾಶ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಇಸ್ರೋ ಹೇಳಿದೆ.

ಚಂದ್ರಯಾನ-3, ಕಡಿಮೆ ಖರ್ಚಿನ ತಂತ್ರಜ್ಞಾನ ಸದ್ಬಳಕೆ, ಈ ಹಿಂದೆ ಯಾರೂ ಇಳಿಯದ ಚಂದ್ರನ ದಕ್ಷಿಣ ಭಾಗಕ್ಕೆ ಚಂದ್ರಯಾನ ಇಳಿದಿರುವುದು ನಾವೀನ್ಯತೆಗೆ ಜಾಗತಿಕ ಪುರಾವೆಯಾಗಿದೆ. ಹೀಗಾಗಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಐಎಎಫ್
ಹೇಳಿದೆ ಎಂದು ಇಸ್ರೋ ತಿಳಿಸಿದೆ.

error: Content is protected !!

Join WhatsApp Group

WhatsApp Share