ಏಕಾಏಕಿ ಚಲಿಸಲಾರಂಭಿಸಿದ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು- ವಿಡಿಯೋ ವೈರಲ್..!

(ನ್ಯೂಸ್ ಕಡಬ) newskadaba.com ಅ. 14 . ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರೊಂದು ತನ್ನಿಂದ ತಾನಾಗಿಯೇ ಚಲಿಸಿರುವ ಘಟನೆ ರಾಜಸ್ಥಾನದ ಜೈಪುರದ ಅಜ್ಮೀರ್ ರಸ್ತೆಯ ಸುದರ್ಶನಪುರದ ಬಳಿ ನಡೆದಿದೆ. ಸದ್ಯ ಬೆಂಕಿಯೊಂದಿಗೆ ಕಾರು ಚಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಎ.ಸಿ.ಯಲ್ಲಿ ಸಮಸ್ಯೆ ಕಾಣಿಸಿಕೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಕಾರಿನಿಂದ ಚಾಲಕ ಕೆಳಗಿಳಿದಿದ್ದರು. ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಉರಿಯತೊಡಗಿದ್ದು, ಬಳಿಕ ಕಾರು ಇದ್ದಕ್ಕಿದ್ದಂತೆ ಮುಂದೆ ಚಲಿಸಿದೆ. ಇದರಿಂದ ಸುತ್ತಲೂ ನೋಡುತ್ತಾ ನಿಂತಿದ್ದ ಜನ ಕಕ್ಕಾಬಿಕ್ಕಿಯಾಗಿ ಓಡತೊಡಗಿದ್ದಾರೆ. ಕಾರು ಸ್ವಲ್ಪ ದೂರ ಹೊಗಿ ಡಿವೈಡರ್ ಗೆ ನಿಂತಿದ್ದು, ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ತನಿಖೆ ನಡೆಯುತ್ತಿದ್ದು, ವಾಹನ ತಯಾರಿಕಾ ಕಂಪನಿಗೆ ನೋಟಿಸ್ ನೀಡಿರುವುದಾಗಿ ತಿಳಿದುಬಂದಿದೆ.

Also Read  ➤ಜಗತ್ತಿನಲ್ಲೇ ಅತೀ ಹೆಚ್ಚು ಇಂಟರ್ನೆಟ್ ಸಂಪರ್ಕ ಸ್ಥಗಿತವಾಗಿರುವುದು ಭಾರತದಲ್ಲಿ

 

error: Content is protected !!
Scroll to Top