ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪ್ರಲ್ಹಾದ ಜೋಶಿ: ಸೌರ ಶಕ್ತಿ ಹೊಸ ಯೋಜನೆಗೆ 500 ಕೋಟಿ ಮೀಸಲು – News Kadaba

ಪ್ರಲ್ಹಾದ ಜೋಶಿ: ಸೌರ ಶಕ್ತಿ ಹೊಸ ಯೋಜನೆಗೆ 500 ಕೋಟಿ ಮೀಸಲು

(ನ್ಯೂಸ್ ಕಡಬ)newskadaba.com, ಅ. 12 ನವದೆಹಲಿ:  ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್ ಯೋಜನೆಯಡಿ ಪುನರ್ ಉತ್ಪಾದಿಸುವ ಇಂಧನ ವಲಯಕ್ಕೆ 500 ಕೋಟಿ ರೂಪಾಯಿ ಮೀಸಲಿರಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪಿಎಂ ಸೂರ್ಯ ಘರ್ ಯೋಜನೆಯಡಿ ಹೊಸ ಯೋಜನೆಗಳ ಅನುಷ್ಠಾನ ಮತ್ತು ಘಟಕಕ್ಕಾಗಿ ₹500 ಕೋಟಿ ಇರಿಸಿ ಮೊನ್ನೆಯಷ್ಟೇ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದಿದ್ದಾರೆ. ಸ್ಕೀಮ್ ಕಾಂಪೊನೆಂಟ್ ‘ಇನ್ನೋವೇಟಿವ್ ಪ್ರಾಜೆಕ್ಟ್’ನಡಿ ರೂಫ್‌ಟಾಪ್ ಸೌರ ತಂತ್ರಜ್ಞಾನ, ವ್ಯವಹಾರ ಮಾದರಿಗಳು ಮತ್ತು ಏಕೀಕರಣ ತಂತ್ರಗಳಲ್ಲಿ ಪ್ರಗತಿಗೆ ಈ ಮೊತ್ತ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ ಹೊಸ ಯೋಜನೆಗಳ ಘಟಕಕ್ಕಾಗಿ ಸ್ಕೀಮ್ ಇಂಪ್ಲಿಮೆಂಟೇಶನ್ ಏಜೆನ್ಸಿ ಆಗಿ ಕಾರ್ಯ ನಿರ್ವಹಿಸುತ್ತದೆ. ಆಯ್ದ ಪ್ರಾಜೆಕ್ಟ್‌ಗಳು ಯೋಜನಾ ವೆಚ್ಚದ ಶೇ.60ರಷ್ಟು ಅಥವಾ ₹30 ಕೋಟಿ, ಯಾವುದು ಕಡಿಮೆಯೋ ಅದನ್ನು ಪರಿಗಣಿಸಿ ಆರ್ಥಿಕ ನೆರವು ಪಡೆಯುತ್ತದೆ ಎಂದು ತಿಳಿಸಿದ್ದಾರೆ.

Scroll to Top