ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮಣಿಪುರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ – News Kadaba

ಮಣಿಪುರದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

(ನ್ಯೂಸ್ ಕಡಬ)newskadaba.com, ಅ. 09 ಮಣಿಪುರ: ಮಣಿಪುರದ ವಿವಿಧ ಭಾಗಗಳಲ್ಲಿ ಕಳೆದ ಮೂರು ದಿನಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂಫಾಲ್‌ ಪೂರ್ವ ಜಿಲ್ಲೆಯ ಚಂಪೈ ಬೆಟ್ಟದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಎಂ-16 ರೈಫಲ್‌ ಮತ್ತು .22 ರೈಫಲ್‌‍, ಎರಡು ಎಸ್‌‍ಎಲ್‌ಆರ್‌, ಒಂದು ದೇಶ ನಿರ್ಮಿತ ಸ್ಟೆನ್‌ ಗನ್‌‍, ಎರಡು ಕಾರ್ಬೈನ್‌ಗಳು, ಎಂಟು ದೇಶೀಯ ನಿರ್ಮಿತ 9 ಎಂಎಂ ಪಿಸ್ತೂಲ್‌ಗಳು, ಮೂವತ್ತು ವ್ಯಾಗಜೀನ್‌ಗಳನ್ನು ವಶಪಡಿಸಿಕೊಂಡಿವೆ.

 

ಮಂಗಳವಾರ ಇಂಫಾಲ್‌ ಪಶ್ಚಿಮ ಜಿಲ್ಲೆಯ ಖೇಲಾಖೋಂಗ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಯಿತು. ವಶಪಡಿಸಿಕೊಂಡ ವಸ್ತುಗಳಲ್ಲಿ ಎಸ್‌‍ಎಲ್‌ಆರ್‌ ರೈಫಲ್‌‍, ಮಾರ್ಪಡಿಸಿದ .303 ರೈಫಲ್‌‍, 9 ಎಂಎಂ ಪಿಸ್ತೂಲ್‌‍, 16 ಸಜೀವ ಗುಂಡುಗಳು ಮತ್ತು ಹ್ಯಾಂಡ್‌ ಗ್ರೆನೇಡ್‌ಗಳು ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Scroll to Top