ಜಮ್ಮು-ಕಾಶ್ಮೀರ: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯೋಧನ ಮೃತದೇಹ ಪತ್ತೆ..!



(ನ್ಯೂಸ್ ಕಡಬ)newskadaba.com ಶ್ರೀನಗರ, ಅ. 09. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಂದು ನಾಪತ್ತೆಯಾಗಿದ್ದ ಯೋಧನ ಮೃತದೇಹವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ.







ಟೆರಿಟೋರಿಯಲ್ ಆರ್ಮಿ ಜವಾನ್ ಹಿಲಾಲ್ ಅಹ್ಮದ್ ಭಟ್ ಅವರ ಮೃತದೇಹವನ್ನು ಅನಂತನಾಗ್‌ನ ಉತ್ರಾಸೂ ಪ್ರದೇಶದ ಸಾಂಗ್ಲಾನ್ ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ದಕ್ಷಿಣ ಕಾಶ್ಮೀರದ ಕೋಕರ್‌ನಾಗ್ ಅರಣ್ಯದಲ್ಲಿ ರಾತ್ರೋರಾತ್ರಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ 26 ವರ್ಷದ ಪ್ರಾದೇಶಿಕ ಸೇನಾ ಸಿಬ್ಬಂದಿಯನ್ನು ಅಪಹರಿಸಿದ್ದರು ಎಂದು ಸೇನೆ ಇಂದು ದೃಢಪಡಿಸಿದೆ.






 

error: Content is protected !!
Scroll to Top