ಕೆನರಾ ಬ್ಯಾಂಕ್‌ನಲ್ಲಿ ಪದವೀಧರರಿಗೆ 3000 ಹುದ್ದೆ- ಅ.4 ಅರ್ಜಿ ಸಲ್ಲಿಸಲು ಕೊನೆ ದಿನ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 01. ಕೆನರಾ ಬ್ಯಾಂಕ್‌ನಲ್ಲಿ ಪದವೀಧರರಿಗೆ  3000 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಅ.4 ಕೊನೆಯ ದಿನವಾಗಿದೆ. ದೇಶಾದ್ಯಂತ ಬ್ಯಾಂಕ್ ಶಾಖೆಗಳಲ್ಲಿ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 21ರಿಂದ ಅಕ್ಟೋಬರ್ 4 ರವರೆಗೆ ಕೆನರಾ ಬ್ಯಾಂಕಿನ ಅಧಿಕೃತ ವೆಬ್ಸೈಟ್ www.canarabank.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಪ್ರೆಂಟಿಸ್ಶಿಪ್ ಪೋರ್ಟಲ್‌ಗೆ ಪ್ರವೇಶಿಸಬೇಕು. (www.nats.education.gov.in) ಅಲ್ಲಿ ನೋಂದಣಿ ಮಾಡಿಸಬೇಕು. ಅಂಥವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

 

Scroll to Top