ವೈದ್ಯನಿಗೆ 63 ಲಕ್ಷ ರೂ ವಂಚನೆ:ಐಎಫ್ಎಸ್ ಅಧಿಕಾರಿ ವಿರುದ್ದ ಪ್ರಕರಣ

(ನ್ಯೂಸ್ ಕಡಬ) newskadaba.com ಸೆ. 27. ಲಕ್ನೋ: ಹೂಡಿಕೆ ನೆಪದಲ್ಲಿ ವೈದ್ಯರೊಬ್ಬರಿಗೆ 64 ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿ ನಿಹಾರಿಕಾ ಸಿಂಗ್ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ರಾಜೇಶ್ ಕುಮಾರ್ ತ್ರಿಪಾಠಿ ಹೇಳಿದ್ದಾರೆ. ಐಎಫ್ಎಸ್ ಅಧಿಕಾರಿ ನಿಹಾರಿಕಾ ಸಿಂಗ್ ಹಾಗೂ ಪಿ ಅಜಿತ್ ಗುಪ್ತಾ ಹಾಗೂ ಅವರ ಸಹ ಕಂಪನಿಗಳು 64,63,250 ರೂಪಾಯಿ ವಂಚಿಸಿದ್ದಾರೆ ಎಂದು ಡಾ.ಮೃದುಲಾ ಅಗರ್ವಾಲ್ ದೂರು ನೀಡಿದ್ದರು. ಈ ಅಧಿಕಾರಿ ಪ್ರಸ್ತುತ ಇಂಡೋನೇಷ್ಯಾದಲ್ಲಿ ಸೇವೆಯಲ್ಲಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

Scroll to Top