ಕಾಡಾನೆ ದಾಳಿ- ಅಪಾರ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 21. ತೋಟಗಳಿಗೆ ನುಗ್ಗಿದ ಕಾಡಾನೆ ಬಾಳೆ, ತೆಂಗು ಹಾಗೂ ಅಡಿಕೆ ಕೃಷಿಯನ್ನು ಹಾನಿ ಮಾಡಿರುವ ಘಟನೆ ಸುಳ್ಯ ತಾಲೂಕಿನ ಪರಿವಾರಕಾನ ಎಂಬಲ್ಲಿ ನಡೆದಿದೆ.

ಪರಿವಾರಕಾನದ ಉಪನ್ಯಾಸಕ ಕೇಪಣ್ಣ, ಸುರೇಶ್‌, ಸತ್ಯನಾರಾಯಣ ಮತ್ತಿತರರ ತೋಟಗಳಿಗೆ ನುಗ್ಗಿದ ಕಾಡಾನೆ ಅಪಾರ ಪ್ರಮಾಣದ ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿಯನ್ನುಂಟು ಮಾಡಿದೆ. ಸ್ಥಳಕ್ಕೆ ಸುಳ್ಯ ನಗರ ಪಂಚಾಯತ್‌ ಉಪಾಧ್ಯಕ್ಷ ಬುದ್ಧ ನಾಯ್ಕ, ಮಾಜಿ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ ಅವರು ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿದುಬಂದಿದೆ.

Scroll to Top