ಯುದ್ದವಿಮಾನಕ್ಕೆ ಮೊದಲ ಮಹಿಳಾ ಫೈಲಟ್ ನೇಮಕ

(ನ್ಯೂಸ್ ಕಡಬ) newskadaba.com ದೆಹಲಿ, ಸೆ. 19. ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಗುಜರಾತ್ ನಂ.18 ಫ್ಲೈಯಿಂಗ್‌ ಬುಲೆಟ್ಸ್‌ ಸ್ಕ್ವಾಡ್ರನ್‌ಗೆ ಮೋಹನಾ ಸಿಂಗ್‌ ನಿಯೋಜನೆಗೊಂಡಿರುವುದಾಗಿ ಅಧಿಕಾರಿ ಮೂಲಗಳು ತಿಳಿಸಿವೆ.

ರಾಜಸ್ಥಾನದಲ್ಲಿದ್ದ ನಂ 3 ಫೈಟರ್‌ ಸ್ಕ್ವಾಡ್ರನ್‌ನಲ್ಲಿ ನಿಯೋಜನೆಗೊಂಡಿದ್ದ ಅವರು ಮಿಗ್‌-21 ಬೈಸಾನ್‌ ಯುದ್ಧ ವಿಮಾನದ ಹಾರಾಟ ನಡೆಸುತ್ತಿದ್ದರು. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಯುದ್ಧವಿಮಾನಗಳ ಪೈಲಟ್‌ಗಳಾಗಿ ಮೂವರು ಮಹಿಳೆಯರು ಸೇರ್ಪಡೆಗೊಂಡರು.

Scroll to Top